Kannada Attitude Status for Whatsapp| Kannada status for whatsapp
WhatsApp Status in Kannada
ಯಾವುದೇ ಒಬ್ಬ ವ್ಯಕ್ತಿ ಏನಾದರು ಸಾಧನೆ ಮಾಡಿದಾಗ ಟೀಕೆ ಮಾಡುವುದು ಸುಲಭ.
ಆದರೆ ಆ ಸಾಧನೆ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸುವುದೇ ಇಲ್ಲ .ಅವರವರ ಕಷ್ಟ ಸುಖ ಅವರಿಗೆ ಗೊತ್ತು.
ಶುಭೋದಯ.
ನಾನು, ನನ್ನದು ಎಂಬ ಸ್ವಾರ್ಥದಿಂದ ಕೆಲವರು ಯೋಚಿಸುತ್ತಾ ಸಂತೋಷವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ ಅವರಿಗೆ ಸಂತೋಷ ಸಿಗುವುದೇ ಇಲ್ಲ. ನೆನಪಿರಲಿ ಯಾವಾಗ ನಮ್ಮಲ್ಲಿ ನಾವು, ನಮ್ಮದು ಎಂಬ ಭಾವನೆ ಮೂಡುತ್ತದೆಯೋ ಆವಾಗ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಶುಭೋದಯ.
ನಮ್ಮಲ್ಲಿ ಸ್ವಲ್ಪವೇ ಜಾಗ ಇದ್ದಾಗ ಇನ್ನೂ ಸ್ವಲ್ಪ ಬೇಕೆನಿಸುತ್ತೆ. ಮುಂದೆ ಕೆಲವು ಜಾಗ ಸಿಕ್ಕಿದಾಗ ಇನ್ನೂ ತುಂಬಾ ಜಾಸ್ತಿ ಬೇಕೆನಿಸುತಿತ್ತು. ಆದರೆ ಎಲ್ಲವನ್ನೂ ಕಳೆದುಕೊಂಡಾಗ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದು. ಜೀವನದಲ್ಲಿ ದುರಾಸೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು. ಶುಭೋದಯ.
ಜೀವನ ಕಬಡ್ಡಿ ಆಟದಂತೆ, ನಾವು ಗೆಲುವಿನ ಗೆರೆ ಮುಟ್ಟುವ ಮೊದಲೇ ಕೆಲವರು ನಮ್ಮ ಕಾಲು ಎಳೆಯುವ ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಅವರು ಕಾಲಿನ ಕೆಳಗೆ ಇರುತ್ತಾರೆ ಹೊರತು ಮೇಲೆ ಬರಲು ಸಾಧ್ಯವಿಲ್ಲ. ಶುಭೋದಯ.
Kannada Status
ಉಸಿರು ಇದ್ದಾಗ ತಬ್ಬಿ ಮುದ್ದಾಡುವ ನಾವು ಸತ್ತ ಮೇಲೆ ನಮ್ಮನ್ನು ಮುಟ್ಟಿದ ನಮ್ಮವರೂ ಕೂಡ ಸ್ನಾನ ಮಾಡದೆ ಮನೆಯೊಳಗೆ ಕಾಲಿಡುವುದಿಲ್ಲ. ಹಾಗಾಗಿ ಜೀವನ ಸಾಗಿಸುವಾಗ ಅಹಂ ಹಾಗೂ ದರ್ಪ ಬೇಡವೇ ಬೇಡ. ಶುಭೋದಯ.
ನಮ್ಮ ಮುಖದ ಬಣ್ಣ ಜೀವನವನ್ನು ಎಂದೂ ಬದಲಾಯಿಸುವುದಿಲ್ಲ. ಆದರೆ ನಾವು ಮಾಡುವ ಸಾಧನೆ ನಮ್ಮ ಜೀವನಕ್ಕೆ ಬಣ್ಣವನ್ನು ತುಂಬುತ್ತದೆ .
ಶುಭೋದಯ.
ಯಾರ ಜೊತೆ ಹೇಗೆ ಇರಬೇಕು, ಎಷ್ಟರ ಮಟ್ಟಿಗೆ ಅಂದರೆ ಅಷ್ಟರ ಮಟ್ಟಿಗೆ. ಕಾರಣ ಎಲ್ಲರೂ ನಮ್ಮವರೆ ಎಂದು ಕೊಂಡು ಒಳ್ಳೆಯದು. ಏನಾದರೂ ಮಾಡಿದರೆ ಕೊನೆಗೆ ನಾವೇ ಕೆಟ್ಟವರಾಗುತ್ತೇವೆ. ಶುಭೋದಯ.
ಮನುಷ್ಯನಿಗೆ ಬೇಡವಾದ ಬೀಜ ಭೂಮಿ ಸೇರುತ್ತದೆ. ಬಿಸಾಡಿದ ಬೀಜದಿಂದ ಮರ ಹುಟ್ಟಿ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು.
ತಿರಸ್ಕಾರ ಗೊಂಡವರಿಗೆ ಮುಂದೊಮ್ಮೆ ಪುರಸ್ಕರಿಸುವಂಥ ಕಾಲ ಬಂದೇ ಬರುತ್ತದೆ. ಇದೇ ಜಗತ್ತಿನ ನಿಯಮ.
ಜೀವನ ಒಂದು ಕವನದಂತೆ, ಅರಿತು ನಡೆದರೆ ಹೂವಿನಂತೆ, ಮರೆತು ನಡೆದರೆ ಮುಳ್ಳಿನಂತೆ, ಸರಿಯಾಗಿ ತಿಳಿದು ನಡೆದರೆ ಬಾಳು ಸವಿ ಜೇನಿನಂತೆ. ಶುಭೋದಯ.
ನಾವು ಹುಟ್ಟಿದಾಗ ನಮ್ಮನ್ನು ಯಾರು ನೋಡೋಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ. ನಾವು ಸತ್ತಾಗ ನಮ್ಮನ್ನು ನೋಡೋಕೆ ಯಾರು ಬರ್ತಾರೆ ಅನ್ನೋದು ನಮಗೆ ಗೊತ್ತಾಗುವುದಿಲ್ಲ. ಆದರೆ ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದವರನ್ನು ನಮ್ಮ ಕೊನೆಯ ಉಸಿರು ಇರೋವರೆಗೂ ಮರೆಯಬಾರದು. ಶುಭೋದಯ.
Kannada Attitude Status
ಜೀವನದಲ್ಲಿ ನಮ್ಮ ಬದುಕು ಮನೆಯ ಕಿಟಕಿಯಂತೆ, ತೆರೆದರೆ ಬೆಳಕು ಬರುತ್ತದೆ, ಮುಚ್ಚಿದ್ದರೆ ಕತ್ತಲು ಕವಿಯುತ್ತದೆ.
ಹಾಗೆಯೇ ನಾವು ಶ್ರಮ ಪಟ್ಟರೆ, ಸುಖ ಬರುತ್ತದೆ ಇಲ್ಲದಿದ್ದರೆ ದುಃಖ ಆವರಿಸುತ್ತದೆ. ಎಲ್ಲವೂ ನಮ್ಮ ಕೈಯಲ್ಲಿ ಯೋಚಿಸಿ ಮುನ್ನುಗ್ಗಿ.
ಕಂಬಳಿ ಹುಳುವಿನಿಂದಲೇ ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ! ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ.
ಮನುಷ್ಯನು ಯಾವಾಗಲೂ ಏನಾದರೂಂದು ಕೆಲಸದಲ್ಲಿ ನಿರತನಾಗಿರಬೇಕು. ಇಲ್ಲದಿದ್ದರೆ, ಬೇರೆಯವರ ತಪ್ಪುಗಳನ್ನು ಕಂಡು ಹಿಡಿಯೋದೇ ಒಂದು ಕೆಲಸವಾಗುತ್ತದೆ. ಹಾಗೂ ಸೋಮಾರಿತನ ಮ್ಯೆಗಂಟಿಸುವಂತಾಗುತ್ತದೆ.
ಮನುಷ್ಯನಿಗೆ ಕಷ್ಟ ಬಂದಾಗ ನೋಡಿ ನಗುವ ಜನಗಳು ಮುಂದೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ. ಇವತ್ತು ನಗುವ ಸಮಯ ಅವರದೇ ಇರಬಹುದು. ನಾಳೆ ನಮ್ಮದೆ ಇರುತ್ತದೆ. ಹಾಗಾಗಿ ನಾವು ಯಾರನ್ನು ಹಗುರವಾಗಿ ನೋಡಿ ನಗುವ ಮನಸ್ಸು ಮಾಡುವುದು ಬೇಡ. ಶುಭೋಧಯ.
ಮನುಷ್ಯನಿಗೆ ಮುಗುಳ್ನಗು ಮತ್ತು ಮೌನ ಇವೆರಡೂ ಅತಿಹೆಚ್ಚು ವಿಷೇಶ ಶಕ್ತಿಯಿರುವ ಎರಡು ಆಯುಧಗಳಿವೆ.
ಒಂದು ಮುಗುಳ್ನಗು ಹಲವು ಸಮಸ್ಯೆಗಳಿಗೆ ಪರಿಹಾರವಾದರೆ, ಅಂತಹ ಕಠಿಣ ಪರಿಸ್ಥಿತಿ ಬಂದಾಗ ಒಂದು ಕ್ಷಣ ಮೌನವಹಿಸಿದರೆ ಜೀವನದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಂದ ಪಾರಾಗಬಹುದು. ಶುಭೋದಯ.
Kannada Status for whatsapp
ಜೀವನ ಒಂದು ಪುಸ್ತಕವಿದ್ದಂತೆ. ಅದರಲ್ಲಿ ಸಾಕಷ್ಟು ವಿಷಯಗಳಿರುತ್ತದೆ. ಪ್ರತಿಯೊಂದು ಪುಟಕ್ಕೆ ಹೋಗುವ ತನಕ ಯಾವಾಗ ಏನಾಗುತ್ತದೆ ಎನ್ನುವುದರ ಅರಿವೇ ಇರುವುದಿಲ್ಲ. ನಿಮಗೆ ಪ್ರತಿಯೊಂದು ಪುಟದಲ್ಲೂ ಒಂದು ಸಂತಸ ಭರಿತ ವಿಷಯ ಸಿಗಲಿ. ಆ ಪುಟವ ಎಂದಿಗೂ ಮರೆಯದಿರಿ.
ಹೆಚ್ಚು ಹಣ ಸಂಪಾದಿಸುವ ಭರದಿಂದ ನಿಮ್ಮ ಮನೆ ಕುಟುಂಬ ಮತ್ತು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದಿರಿ, ಹಣ ಎಂಬುದು ಯಾವತ್ತೂ ಶಾಶ್ವತವಲ್ಲ, ಹಣ ಬರುತ್ತದೆ, ಹೋಗುತ್ತದೆ, ಆದರೆ ಪ್ರೀತಿ ವಾಸ್ತಲ್ಯ ಗೌರವ ಮತ್ತು ಆರೋಗ್ಯ ಒಮ್ಮೆ ಕಳಕೊಂಡರೆ ಮತ್ತೆ ಗಳಿಸುವುದು ಸಾಧ್ಯವಿಲ್ಲ.
ಶುಭೋದಯ
ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ.
ಜಗತ್ತೇ ನಮ್ಮನ್ನು ನೋಡಬೇಕು ಅಂತ ನಿರೀಕ್ಷಿಸುವ ಮೊದಲು ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದು. ಶುಭೋದಯ.
ಮನೆಯೇ ಮಂದಿರವಾಗಲಿ ಮನಸು ದೇವರಾಗಲಿ ನಿಮ್ಮ ಪ್ರೀತಿ, ಹಾರೈಕೆಗಳೇ ನನಗೆ ದಾರಿದೀಪವಾಗಲಿ.
ಬದುಕು ಕ್ರಿಕೆಟ್ ಇದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ….. ನಮ್ಮ ಸೋಲಿಗಾಗಿಯೇ ಕಾದು ಕುಳಿತಿರುತ್ತಾರೆ ಅನ್ನೋದು ಸತ್ಯ.
ಮನುಷ್ಯ ಮನೆಮನೆಯಲ್ಲು ಜನಸಿತ್ತಾನೆ ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ.
ಒಂದು ಬಾರಿ ಅರ್ಜುನ, ಶ್ರೀ ಕೃಷ್ಣನನ್ನು ಕೇಳಿದ
“ಈ ಗೋಡೆಯ ಮೇಲೆ ಒಂದು ಸಂದೇಶ ಬರಿ, ಅದು ಹೇಗಿರಬೇಕೆಂದರೆ, ಖುಷಿಯಲ್ಲಿದ್ಧಾಗ ಓದಿದರೆ ದುಃಖವಾಗಬೇಕು. ದುಃಖವಾಗಿದ್ದಾಗ ಓದಿದರೆ ಸಂತೋಷವಾಗಬೇಕು…”
ಕೃಷ್ಣನು ಬರೆದ : ” ಈ ಸಮಯ ಕಳೆದು ಹೋಗುತ್ತದೆ!
ನಾನು ಬದುಕಿರುವುದು ಒಂದು ದಿನ ಸಾಯುವುದಕಲ್ಲ…ಸಾಧಿಸುವುದಕ್ಕೆ
ನಿಮ್ಮ ನೆಚ್ಚಿನ ಹಾಡುಗಳನ್ನು ಕೇಳಲು ಲೈಫ್ ಮ್ಯೂಸಿಕ್ ಪ್ಲೇಯರ್ ಅಲ್ಲ, ಇದು ಪ್ರತಿ ಆವರ್ತನಕ್ಕೂ ನೀವು ಹೊಂದಿಕೊಳ್ಳಬೇಕು ಮತ್ತು ಅದರಲ್ಲಿ ಬರುವ ಯಾವುದನ್ನಾದರೂ ಆನಂದಿಸಬೇಕು.
Love Status in Kannada
ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣಿರಾಗಬಾರದು.. ಮನಸ್ಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಗಿರಬೇಕು..
ಹೂವು ಮುಳ್ಳುಗಳು ವೈರಿಗಳಾದ್ರೆ ಹೂವಿಗುಂಟೆ ಬಹುದಿನ? ಹೂವನ್ನು ಮರೆತರೆ ದುಂಬಿಗುಂಟೆ ಅನುದಿನ?
ಕಲ್ಲಾದರೆನಾನುಕೋಲಾರದಮಣ್ಣಲ್ಲಿಮರೆವೆ ಬೇಲೂರಿನಗುಡಿಯಲ್ಲಿಇರುವೆ ಮಣ್ಣದರೆನಾನುಕೋಲಾರದಮಣ್ಣಲ್ಲಿ_ಬೆರೆವೆ
ಮರವಾದರೆನಾನುಚಾಮುಂಡಿಗೆ_ನೆರಳಾಗಿರುವೆ ಮಗುವಾದರೆಕಾವೇರಿಯಮಡಿಲಲಿ_ನಗುವೆ
ನನ್ನ ನೋವು ಕೆಲವು ಸಲ ರಾತ್ರಿಯ ಮೌನವನ್ನು ಸೀಳಿಕೊಂಡು ಹೊರ ಬರುತ್ತದೆ…
ಆಸೆಗೆ ಕೊನೆ ಇಲ್ಲಾ , ಪ್ರೀತಿಗೆ ಸಾವೇ ಇಲ್ಲಾ
ಮಳೆಗೆ ಬಡ್ತನ ಬಂದ್ರೆ ಅದ್ನ ಬರಗಾಲ ಅಂತೀವಿ… ಬುದ್ಧಿಗೆ ಬಡ್ತನ ಬಂದ್ರೆ ಅದ್ನ ಕೇಡಗಾಲ ಅಂತೀವಿ…
ನೂರಾರು ಹುಡುಗಿರು ನನ್ನ ಮುಂದೆ ಬಂದ್ರು ನಾನು ನೋಡಲ್ಲ…. ಯಾಕಂದ್ರೆ ನನಗೋಸ್ಕರನೆ ಅಂತ ನನ್ನ ಪ್ರೀತಿಸೋ ಒಂದು ಜೀವ ಕಾಯ್ತಾಯಿದೆ. ಆ ಒಂದು ಜೀವಕ್ಕೆ ನಾನು ಮೋಸ ಮಾಡಲ್ಲ………
ಇಷ್ಟಪಟ್ಟಿರೋ ವಸ್ತುಗಳನ್ನು ಮರಿಬಹುದು. ಆದ್ರೆ ಇಷ್ಟಪಟ್ಟಿರೋ ವ್ಯಕ್ತಿಗಳನ್ನು ಮರೆಯಕ್ಕಾಗಲ್ಲ…
ಬೇಜಾರುಗಳ ಬಾಜಾರು ಈ.. ಮನಸ್ಸು..!!
ನಾವ ಇಷ್ಟ ಪಡೋರು ನಮ್ಮನ್ನು ಯಾಕ ಇಷ್ಟ ಪಡಲ್ಲ ಅಂತಾ ಗೊತ್ತಾದಾಗ ಆಗೋ ನೋವೇ ಬೇರೆ…
ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ…..
ಅವಳು ಬಾನಲ್ಲಿನ ಗಗನಸಖಿ, ನಾನು ಬಾರಲ್ಲಿನ ಮಹಾದು:ಖಿ…
ಪ್ರೀತಿ ಮಾಡಿದ ಹುಡುಗಿ ಸತ್ತಾಗ ತಾಜ್ ಮಹಲ್ ಕಟ್ಟೋ ಅಷ್ಟು ಸಾಹುಕಾರ ನಾನಲ್ಲ…. ಆದರೆ ನನ್ನ ನಂಬಿರೋ ಹುಡುಗಿನ ಶಹಜನ್ ಗಿಂತಲೂ ಒಂದು ಕೈ ಜಾಸ್ತಿನೆ ಪ್ರೀತಿ ಮಾಡ್ತೀನಿ……
ಆಕಾಶ ಕೈಚಾಚಿದೆ ನನ್ನ ಕಣ್ಣೀರೊರೆಸಲು, ಬಿರುಗಾಳಿ ಸ್ತಬ್ದವಾಗಿದೆ ನನ್ನ ಮೌನ ಮುರಿಯಲು, ಈ ಭೂಮಿ ಹಗುರಾಗಿದೆ ನನ್ನ ಮನದ ಭಾರವಿಳಿಸಲು…
ಹೆಣ್ಣು ಅಂದ್ರೆ, ಸಕಲ ಜೀವಿಗಳಿಗೂ ತಾಯಿಯಾಗಿ ಪುರುಷರಿಗೆ ಪತ್ನಿಯಾಗಿ ಅಣ್ಣ-ತಂಮ್ಮಂದಿರಿಗೆ ಸಹೋದರಿಯಾಗಿ ಕಾಮುಕರೀಗೆ ಭೋಗವಸ್ತುವಾಗಿ ದೌರ್ಜನ್ಯಕ್ಕೆ ಬಲಿಯಾಗಿ ಮುನಿಗಳಿಗೆ ಮಾಯೆಯಾಗಿ ದುಷ್ಟರೀಗೆ ಪರಮಶಕ್ತಿಯಾಗಿ ಯುಗ-ಯುಗಗಳಿಂದಲೂ ಸಂಪೂರ್ಣ ಅಂತರಾಳವ ಅರಿಯಲಾಗದಷ್ಟು ಸಹನೆಯುಳ್ಳವಳು ಹೆಣ್ಣನ್ನು ಗೌರವಿಸುವುದು ನಮ್ಮ ಕರ್ತವ್ಯ ಪ್ರೀತಿಗಾಗಿ
ನಾನು ದಾರಿ ತಪ್ಪಿದ ಮಗಳು, ನನ್ನೊಡಿ ನಗುತಿವೆ ಈ ಹೂಗಳು, ಅತ್ತು ಕಂಗೆಟ್ಟಿವೆ ಕಂಗಳು, ಕತ್ತು ಸೇರದಾಗಿದೆ ಅನ್ನದಗಳು…
ಶಿಲುಬೆಗೇರಿಸಿದವರ ಶಪಿಸದೇ ಹೋದ ಯೇಸುದೇವ, ಮನವ ನೋಯಿಸಿದವರ ಮನವ ಗೆದ್ದ ಬುದ್ಧದೇವ…
ಓ ನನ್ನ ನೆನಪೇ, ಪ್ಲೀಸ್ ನನ್ನಿಂದ ದೂರಾಗು… ಪ್ಲೀಸ್ ನನ್ನ ಬದುಕಿಸು…
ಪ್ರೀತಿ ಮಾಡಬಾರದು. ಮಾಡಿದರೆ ಮೋಸ ಹೋಗಬಾರದು…
ನನ್ನೆದೆಯಲ್ಲಿರುವ ಹೂವು ನೀನು. ಆದ್ರೆ ನಿನ್ನೆದೆಯಲ್ಲಿನ ಮುಳ್ಳು ನಾನು…
ಒಲವಿನ ಸುಂದರಿ ಕೊಂದಳು ಯಾಕೇರಿ? ಒಲವಿನ ಕಥೆಯಲಿ, ಮೋಹದ ಬಲೆಯಲಿ…
ಅರ್ಥ ಮಾಡಿಕೊಳ್ಳುವ ಮನಸ್ಸು ನಿನಗಿಲ್ಲ ಎಂದರೆ ಪದೇ ಪದೇ ಹೇಳುವ ಆಸೆ ಕೂಡ ನನಗಿಲ್ಲ.
ಜೀವನದಲ್ಲಿ ಬಣ್ಣಗಳು ಎಷ್ಟು ಮುಖ್ಯವೋ …ಭಾವನೆಗಳು ಅಷ್ಟೇ ಮುಖ್ಯ.
Motivational Status in Kannada
ಮ೦ಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ ನಾವು ನೆನೆಸಿದಂತೆ ಬಾಳಲೇನು ನಡೆಯದು
ಇನ್ನೊಂದು ಮನೆಯ ಹೆಣ್ಣವಳು,ಕಣ್ಣವಳು ನಿಂದಿಸದಿರು,ನೋಯಿಸದಿರು ಮತ್ತೊಂದು ಮನೆ ಬೆಳಗೋ ಬೆಳಕವಳು.
ಕೆಲವೊಮ್ಮೆ ಪಡೆದುಕೊಂಡ ಪಲಿತಾಂಶಗಿಂತ ನಡೆದುಬಂದ ದಾರಿಯೇ ಮುಖ್ಯವಾಗಿರುತ್ತೆ
Kannada Heart Touching Whatsapp Status, Quotes
ಮಚ್ಚುಗಿಚ್ಚುಇಡಿದವನಲ್ಲ ಆದ್ರೂಹವಾಇಟ್ಟವನಲ್ಲಾ ಕೋಟೆಕಟ್ಟಿಮೆರೆದವನಲ್ಲ ಆದ್ರೂರಾಜ್ಯಅಳ್ರಾವನಲ್ಲಾ.. ಐ_ಯಮ್ ವಿಲನ್
“ಇದು ನನ್ನ ತಂದೆ ನನ್ನ ಗೌರವಿಸುತ್ತಾರೆ ನನಗೆ ಕಲಿಸಿದ ಯಾರು. ಅವರು ಅವನ ಜೀವನದ ಅತ್ಯಂತ ಅಮೂಲ್ಯ ವಸ್ತು ಎಂದು ನಾನು ಸುಂದರ ಅಸಾಮಾನ್ಯವಾದ ಹೇಳಿದಾಗ. “……………………… ಪ್ರಪಂಚದ ………………………………….
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ – ಸರ್ವಜ್ಞ
ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ ಒಂದು ‘ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ‘ – ಕೆ. ಶಿವರಾಮ ಕಾರಂತ
ವಚನ ಸುಧೆ. ಆಳತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ ಕಾಣಾ ಚನ್ನಮಲ್ಲಿಕಾರ್ಜುನಾ. ಅಕ್ಕಮಹಾದೇವಿ…
ವಚನ ಸುಧೆ. ರತ್ನದ ಸಂಕೋಲೆಯಾದಡೆ ತೊಡರಲ್ಲವೇ ? ಮುತ್ತಿನ ಬಲೆಯಾದಡೆ ಬಂಧನವಲ್ಲವೇ ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ? ಅಕ್ಕಮಹಾದೇವಿ.
ವಚನ ಸುಧೆ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ. ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಾಣಯ್ಯಾ. ಬಸವಣ್ಣ.
ವಚನಸುಧೆ ಪಾತಾಳದಿಂದತ್ತ ಮಾತ ಬಲ್ಲವರಿಲ್ಲ. ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ. ಹೊರಗಣ ಹೊರಗನು ಅರಿಯ ಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು ತಂದೆ ತೋರಿದ ನಮ್ಮ ಗುಹೇಶ್ವರನು. -ಅಲ್ಲಮ ಪ್ರಭು..
“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.” – ಡಾ. ಶಿವರಾಮ ಕಾರಂತ
Best Kannada Shayari, Quotes and status
ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ , ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ…ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
ರಂಗ್ಯಾ: ನನಗೆ ದಾರಿಯಲ್ಲಿ ಬರಬೇಕಾದರೆ ಐನೂರು ರೂಪಾಯಿ ನೋಟು ಸಿಕ್ತು. ಬಸ್ಯಾ: ಅದೃಷ್ಟವಂತ ಕಣಯ್ಯಾ ನೀನು.. ಆಮೇಲೆ? ರಂಗ್ಯಾ: ಆ ನೋಟಿನಲ್ಲಿ ಹ್ಯಾಪ್ಪಿ ದೀಪಾವಳಿ ಎಂದು ಬರೆದಿತ್ತು..ಬಸ್ಯಾ: ಮತ್ತೆ ನೀನು ಏನ್ ಮಾಡ್ದೆ? ರಂಗ್ಯಾ: ನನ್ನ ಜೇಬಿನಲ್ಲಿದ್ದ ಐನೂರು ರೂಪಾಯಿ ನೋಟು ತೆಗೆದು, ಅದರಲ್ಲಿ ‘ಹ್ಯಾಪ್ಪಿ ದೀಪಾವಳಿ ಯು ಟೂ‘ ಎಂದು ಬರೆದು ಎರಡೂ ನೋಟನ್ನು ಅಲ್ಲೇ ಬಿಟ್ಟು ಬಂದೆ
ಗಂಡ, ಹೆಂಡತಿ ಸಿನಿಮಾ ನೋಡಲು ಹೋಗ್ತಾರೆ.. ಹೆಂಡತಿ: ರೀ. ರೀ..ಗಂಡ: ಏನೇ ಅದು..
ಹೆಂಡತಿ: ಹಿಂದ್ಗಡೆ ಸೀಟ್ ನವನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ… ಗಂಡ: ಹಿಂದೆ ತಿರುಗಿ ನಿನ್ನ ಮುಖ ತೋರಿಸು.. ಕಾಲ್ ಹಾಕುವುದನ್ನು ಬಿಡ್ತಾನೆ.
ನಾನು ಮದುವೆ ಯಾಗುವ ಹುಡಿಗಿ ಕಪ್ಪು ಗಿದ್ದರು ಪರವಾಗಿಲ್ಲ ,ನಾ ಮಾತಾಡುವಾಗ ತೆಪ್ಪುಗಿದ್ದರೆ ಸಾಕು.
ಕುಡಿಯೋದು ಬಿಡೋ ತಿಮ್ಮ ದಿನಾ ಸ್ವಲ್ಪ ಸ್ವಲ್ಪನೇ ಅಮ್ಮ ಜಾಸ್ತಿಯಾಗಿದೆ ನಿನ್ನ ಕೆಮ್ಮ ಕಾನ್ಸರ್ ಆಗಿಲ್ಲ ಬಿಡಮ್ಮ ಮೊನ್ನೆ ತೀರಿ ಹೋದ ತಿಮ್ಮ ಈಗ ಒಬಂಟಿ ಅವನಮ್ಮ
ನಮ್ಮೆದುರಿನ ಎಲ್ಲವನ್ನೂ ತುಲನೆ ಮಾಡುವುದು ನಮ್ಮದೇ ಮನಸ್ಸು, ನಮ್ಮ ಮನಸ್ಥಿತಿ ಹೇಗಿರುತ್ತೊ..? ಹಾಗೆ ವಸ್ತುಸ್ಥಿತಿ ಕಾಣುತ್ತಿರುತ್ತದೆ. ಇದು ವಿಚಿತ್ರವಾದರೂ ಸತ್ಯ..
Me: I love uಹುಡ್ಗಿ : ಪ್ರಿನ್ಸಿಪಾಲ್ ಗೆ ಹೆಳ್ತೆನೇ Me:ಹೆಳ್ಕೊ ಹೋಗೆ ಹಾಗೆ ಪ್ರಿನ್ಸಿಪಾಲ್ ಮಗಳ್ನು ಕೇಳ್ದೆ ಅಂತ ಹೇಳು
Funny Status in Kannada
ನನ್ನ ಗಂಡನ ಸುಖ ಶಾಂತಿಗಾಗಿ ನಾನು ಯಾವ ವೃತ ಮಾಡಿದರೆ ಒಳ್ಳಯದು ಶಾಸ್ತ್ರಿಗಳೇ…? ನೀನು ದಿನಾ ಮೌನ ವೃತ ಮಾಡಿದರೆ ಸಾಕು ಮಗಳೇ..
ಡಿಪ್ಲೋಮಾ ಆದ ಮೇಲೆ ಎಂಜಿನಿಯರಿಂಗ್ ಮಾಡೋದು ಎಷ್ಟು ಇಂಪಾರ್ಟೆಂಟ್ ಅಂದ್ರೆ ಸತ್ತ ಮೇಲೆ ತಿಥಿ ಮಾಡ್ದoಗೆ ಉಪಯೋಗ ಏನ್ನೂ ಇಲ್ಲ ಜಸ್ಟ್ ಆತ್ಮಕ್ ಶಾಂತಿ ಸಿಗ್ತದೆ..
ಗಂಡ – ಲೇ ನಿನ್ನಗೆ ಹಬ್ಬಕ್ಕೆ ಸೀರೆ ತರಲಾ ಚೂಡಿ ದಾರ ತರಲಾ?
ಹೆಂಡತಿ – ನಿಮಗೆ ಬಟ್ಟೆ ಒಗೆಯೋ ದಕ್ಕ್ ಯಾವುದು ಸುಲಭ ಅನ್ಸು ತೋ ಅದನೇ ತನೀ
ಸ್ವೀಟ್ ಹಾರ್ಟ್ …
ಹುಡುಗಿ:ಒಂದು ಕವನ ಹೇಳು ಪ್ಲೀಜ್..
ಹುಡುಗ:ನಿನ್ನ ನೋಡಿದಾಗ ನಾ ನನ್ನ ಮರೆತೆ ..
ಹುಡುಗಿ: ವಾಹ್,ಸೂಪರ್..ಆಮೇಲೆ?
ಹುಡುಗ: ನಿನ್ನ ತಂಗಿಯನ್ನ ನೋಡಿದ ಮೇಲೆ ನಿನ್ನನೇ ಮರೆತೆ…
ಟೀಚರ್:-“ಪ್ರಸಾದ್ ಜೂನಿಯರ್ ಗೂ ಸೀನಿಯರ್ ಗೂ ಇರೋ ವ್ಯತ್ಯಾಸವೇನೂ…??”
ಪ್ರಸಾದ್:- ” ಟೀಚರ್ ,ಮೃಗಾಲಯ ಹತ್ತಿರ ವಾಸಿಸುವವರನು ಜೂನಿಯರ್ ಎಂದೂ ,ಸಮುದ್ರದ ಹತ್ತಿರ ವಾಸ ಮಾಡುವವರನೂ ಸೀನಿಯರ್ ಎಂದೂ ಕರೆಯುತ್ತಾರೆ .”
ಶಾಲೆಯೊಂದರಲ್ಲಿ ಟೀಚರ್ ಮಾನವೀಯತೆ, ಪರೋಪಕಾರದ ಬಗ್ಗೆ ಪಾಠ ಮಾಡುತ್ತಾ.. ಶಿಕ್ಷಕಿ : ಯಾರು ಕಷ್ಟದ ಸಮಯದಲ್ಲಿ ಇತರರಿಗೆ ಸಹಾಯ ಮಾಡುತ್ತಾರೋ ಅವರೇ ನಿಜವಾದ ಮನುಷ್ಯರು. ವಿದ್ಯಾರ್ಥಿ: ಆದರೆ ಪರೀಕ್ಷೆಯ ಹಾಲ್ ನಲ್ಲಿ ನೀವು ಯಾಕೆ ಮನುಷ್ಯರಾಗಿ ಇರುವುದಿಲ್ಲ, ಯಾಕೆ ಬೇರೆಯವರನ್ನು ಮನುಷ್ಯರಾಗಿ ಇರೋಕೆ ಬಿಡೋಲ್ಲಾ.. ಶಿಕ್ಷಕಿ: ಮುಚ್ಚೋ ಬಾಯ್..
ಡಾಕ್ಟರ್: ಬನ್ನಿ ಉಮೇಶ್.. ಏನ್ ಸಮಾಚಾರ?ಉಮೇಶ್: ಸ್ವಲ್ಪ ಹುಷಾರಿಲ್ಲಾ ಡಾಕ್ಟ್ರೇ… ಯಾಕೋ ತಲೆ ಭಾರ..ಡಾಕ್ಟರ್: ಡ್ರಿಂಕ್ಸ್ ಮಾಡ್ತೀರಾ?ಉಮೇಶ್: ಹೂಂ… ಆದ್ರೆ ಗ್ಲಾಸ್ ತಂದಿಲ್ಲಾ ಡಾಕ್ಟ್ರೇ.. ನಿಮ್ ಗ್ಲಾಸ್ ನಲ್ಲೇ ಸ್ವಲ್ಪ ಹಾಕ್ಕೊಡಿ…
love ಫೇಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?ಹುಡುಗರು ಅವರ ಗಡ್ಡ ಮೀಸೆ ತೆಗೆದರೆಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ
ಹುಡುಗಿರು ಅವರ ಮೇಕಪ್ ತೆಗೆದ್ರೆ
ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ.. ಗುಂಡ : “ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ ”
ಗಂಡ : ಡಾಕ್ಟ್ರೇ ಅರ್ಜೆಂಟ್. ನನ್ನ ಹೆಂಡ್ತಿಗೆ ಅಪೆಂಡಿಸೈಟಿಸ್ ಆಗಿರ್ಬೇಕು…ಹೊಟ್ಟೇನೋವು ಅಂತಿದಾಳೆ…ಕೂಡಲೇ ಬನ್ನಿ! ಡಾಕ್ಟರ್ : Impossible…ಕಳೆದ ವರ್ಷವಿನ್ನೂ ನಿಮ್ಮ ಹೆಂಡತಿಗೆ ಅಪೆಂಡಿಸೈಟಿಸ್ ಆಪರೇಷನ್ ಮಾಡಿದ್ದೇನೆ. ಎರಡೆರಡು ಅಪೆಂಡಿಕ್ಸ್ ಇರೋಲ್ಲ. ಗಂಡ : ಎರಡೆರಡು ಅಪೆಂಡಿಕ್ಸ್ ಇರೋಲ್ಲ ಸರಿ ಡಾಕ್ಟ್ರೇ..ಎರಡೆರಡು ಹೆಂಡತಿ ಇರಬಾರದಾ?!
Post a Comment